ನಮ್ಮ ಶಾಲೆಯಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲೆಯ ಆವರಣವನ್ನು ಕೆಂಪು ಮತ್ತು ಹಳದಿ ಬಣ್ಣದ ಬಾವುಟಗಳಿಂದ ಶೃಂಗರಿಸಲಾಗಿ, ಕಾರ್ಯಕ್ರಮವು ಕನ್ನಡಾಂಬೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭವಾಯಿತು. ಮುಖ್ಯ ಅತಿಥಿಗಳಾದ ನಮ್ಮ ಶಾಲೆಯ ಉಪಾಧ್ಯಕ್ಷರಾದ ಶ್ರೀಯುತ ಚಂದ್ರಮೋಹನ್ ಸರ್ ರವರು ಧ್ವಜಾರೋಹಣ ಮಾಡಿದರು. ನಂತರ ನಾಡಗೀತೆ ಹಾಡಲಾಯಿತು 🗣️ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಹಾಡು, ಭಾಷಣ ಪ್ರದರ್ಶಿಸಿದರು. ಶಿಕ್ಷಕರು ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿದರು. ಕರ್ನಾಟಕದ ಇತಿಹಾಸ, ಕನ್ನಡದ ಹಿರಿಮೆ ಮತ್ತು ಕನ್ನಡಿಗರ ಸಾಧನೆಗಳ ಬಗ್ಗೆ ತಿಳಿದುಕೊಂಡೆವು. ಎಲ್ಲರೂ ಕನ್ನಡ ಭಾಷೆಯನ್ನು ಪ್ರೀತಿಸಿ ,ಗೌರವಿಸಿ ಬೆಳೆಸುವ ಪ್ರತಿಜ್ಞೆ ಮಾಡಿದರು. ಈ ಕಾರ್ಯಕ್ರಮವು ನಮಗೆಲ್ಲರಿಗೂ ಹೆಮ್ಮೆ ಮತ್ತು ಸಂತೋಷವನ್ನು ತಂದಿತು. ನಮ್ಮ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಆಚರಣೆಯ ಒಂದು ಮರೆಯಲಾಗದ ಸುಂದರ ಅನುಭವದ ತುಣುಕುಗಳನ್ನು ಇಲ್ಲಿ ವೀಕ್ಷಿಸಬಹುದು. ಜೈ ಕರ್ನಾಟಕ ಮಾತೆ🙏